   ಮೂಲದೊಡನೆ ಪರಿಶೀಲಿಸಿ
ಕಾಮನ್‍ವೆಲ್ತ್ ರಾಷ್ಟ್ರಸಮುದಾಯ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಬ್ರಿಟಿಷ್ ದೊರೆತನಕೆ ಗೌರವ ಸಲ್ಲಿಸುವ ದೇಶ ಪ್ರದೇಶಗಳ ಅಥವಾ ಅದರ ಅಧ್ಯಕ್ಷತೆಯಲ್ಲಿ ಒಂದುಗೂಡಲು ಸ್ವಂತ ಇಚ್ಛೆಯಿಂದ ಒಡಂಬಟ್ಟ ಸ್ವತಂತ್ರ ರಾಷ್ಟ್ರಗಳ ಸಮುದಾಯ (ಕಾಮನ್‍ವೆಲ್ತ್ ಆಫ್ ನೇಷನ್ಸ್). ಈ ಸಮುದಾಯದ ರಾಷ್ಟ್ರಗಳು ಹಿಂದೆ ಬ್ರಿಟಿಷ್ ಕಾಮನ್‍ವೆಲ್ತ್ ಅಥವಾ ಬ್ರಿಟಿಷ್ ಚಕ್ರಾಧಿಪತ್ಯದ ಅಂಗಗಳಾಗಿದ್ದುವು. ಈ ಸಮುದಾಯದಲ್ಲಿ ಅಧೀನ ರಾಷ್ಟ್ರಗಳೂ ಆಶ್ರಿತ ದೇಶಗಳೂ ವಿಶ್ವಸಂಸ್ಥೆಯಿಂದ ಬ್ರಿಟನಿನ ಆಳ್ವಿಕೆಗೆ ಕೊಡಲಾದ ನ್ಯಾಸ ಪ್ರದೇಶಗಳೂ ಇವೆ. ಈ ಸಮುದಾಯದಲ್ಲಿಯ ಅನೇಕ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಬ್ರಿಟನಿಗೆ ಯಾವುದೇ ಬಗೆಯ ನೇರ ಸಂಬಂಧವಾಗಲಿ ಪ್ರಭಾವವಾಗಲಿ ಇಲ್ಲ. ಆದರೆ ಕೆಲವು ದೇಶಗಳಲ್ಲಿ ಆಯಾದೇಶಗಳ ಜನಪ್ರತಿನಿಧಿಗಳಿಂದ ಸೂಚಿತವಾಗಿ ಬ್ರಿಟನಿನ ರಾಣಿಯಿಂದ (ಅಥವಾ ದೊರೆಯಿಂದ) ನೇಮಕವಾದ ಗವರ್ನರ್ ಜನರಲರು ಅಧಿಕಾರ ನಡೆಸುತ್ತಾರೆ. ಈ ಸಮುದಾಯದಲ್ಲಿ ಸಂಸದೀಯ ಸರ್ಕಾರಗಳಿರುವ ದೇಶಗಳ ಸಂಖ್ಯೆಯೇ ಅಧಿಕ.

 ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜಪ್ರಭುತ್ವ. ಕೆನಡ, ಆಸ್ಟ್ರೇಲಿಯ, ನ್ಯೂಜಿûೀಲೆಂಡ್, ಸಿಂಹಳ, ಸೀಯೆರ ಲಿಯೋನ್, ಜಮೇಕ ಟ್ರಿನಡ್ಯಾಡ್ ಮತ್ತು ಟಬೇಗೋ, ಮಾಲ್ಟ, ಗಾಂಬಿಯ, ಬಾರ್ಬಡಾಸ್, ಗೈಯಾನ, ಮಾರಿಷಸ್ ಮತ್ತು ಇತರ ಸ್ವತಂತ್ರ ಪ್ರದೇಶಗಳೂ ಬ್ರಿಟಿಷ್ ರಕ್ಷಣೆಗೆ ಒಳಪಟ್ಟ ಪ್ರದೇಶಗಳೂ ರಾಜ್ಯಗಳೂ ಭಾರತ, ಪಾಕಿಸ್ತಾನ, ಘಾನ, ಸೈಪ್ರಸ್, ತಾಂಜನೀಯ, ನೈಜೀರಿಯ, ಉಗಾಂಡ, ಜಾಂಬಿಯ, ಕೀನ್ಯ, ಸಿಂಗಪುರ, ಮಲಾವಿ, ಬಾಟ್‍ಸ್ವಾನ ಗಣರಾಜ್ಯಗಳೂ ಮಲೇಷ್ಯ, ಲಸೋತೋ, ಸ್ವಾಜಿûೀ ಲ್ಯಾಂಡ್ ಸ್ವತಂತ್ರ ರಾಜಪ್ರಭುತ್ವಗಳೂ ಕಾಮನ್‍ವೆಲ್ತಿನ ಸದಸ್ಯತ್ವ ಪಡೆದಿವೆ. ವಿಶ್ವದ ಪ್ರತಿಯೊಂದು ಖಂಡದಿಂದಲೂ ಒಂದು ರಾಷ್ಟ್ರಕ್ಕಾದರೂ ಕಾಮನ್‍ವೆಲ್ತ್ ರಾಷ್ಟ್ರಸಮುದಾಯದಲ್ಲಿ ಸದಸ್ಯತ್ವವುಂಟು. ಬ್ರಿಟಿಷರ ಆಡಳಿತಕ್ಕೊಳಪಟ್ಟಿರುವ ರಾಜ್ಯಗಳೂ ರಕ್ಷಿತ ಪ್ರದೇಶಗಳೂ ನ್ಯಾಸ ಪ್ರದೇಶಗಳೂ ಈ ಸಮುದಾಯದಲ್ಲಿವೆ.

 ಒಂದು ಹೊಸ ರಾಷ್ಟ್ರ ಕಾಮನ್‍ವೆಲ್ತಿನ ಸದಸ್ಯತ್ವ ಪಡೆಯಬೇಕಾದರೆ ಉಳಿದ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಬೇಕು. ಸದಸ್ಯತ್ವ ಐಚ್ಛಿಕ. ಅಂದರೆ ಬ್ರಿಟನಿನ ಅಧೀನದಲ್ಲಿರುವ ಒಂದು ರಾಷ್ಟ್ರ ಸ್ವಾತಂತ್ರ್ಯ ಗಳಿಸಿದ ಮೇಲೆ, ಕಾಮನ್‍ವೆಲ್ತಿಗೆ ಬೇಕಾದಲ್ಲಿ ಸೇರಬಹುದು; ಹಾಗಿಲ್ಲದೆ ಇದ್ದರೆ ಬಿಡಬಹುದು. ಉದಾಹರಣೆಗೆ ಬರ್ಮ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಮೇಲೆ ಕಾಮನ್‍ವೆಲ್ತನ್ನು ಸೇರಲಿಲ್ಲ. ಕಾಮನ್‍ವೆಲ್ತಿನಲ್ಲಿರುವ ರಾಷ್ಟ್ರ ಅದರಿಂದ ಹೊರಬರಲೂಬಹುದು. ಉದಾಹರಣೆಗೆ 1949ರಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯ ಹಾಗೂ ಐರ್ಲೆಂಡ್ ಗಣರಾಜ್ಯ ಕಾಮನ್‍ವೆಲ್ತ್ ಒಕ್ಕೂಟದಿಂದ ಹೊರಬಂದವು. ಕಾಮನ್‍ವೆಲ್ತ್ ರಾಷ್ಟ್ರಸಮುದಾಯ ಸ್ವಂತ ಇಚ್ಛೆಯಿಂದ ಪ್ರೇರಿತವಾದ ರಾಷ್ಟ್ರಗಳ ಸಂಘವೆಂಬುದಕ್ಕೆ ಇವು ದೃಷ್ಟಾಂತಗಳು.

 ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದ ಸದಸ್ಯ ರಾಷ್ಟ್ರಗಳ ವಿಸ್ತೀರ್ಣ ಮತ್ತು ಜನಸಂಖ್ಯೆಗಳನ್ನು ಸೂಚಿಸುವ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ:

 

ಕಾಮನ್‍ವೆಲ್ತಿನ ಸ್ವತಂತ್ರ ರಾಷ್ಟ್ರಗಳು

    

ವಿಸ್ತೀರ್ಣ(ಚ.ಮೈ.)

ಜನಸಂಖ್ಯೆ

ಸ್ವಾvಂತ್ರ್ಯ ಪqz ದಿನಾಂP

ಬ್ರಿಟನ್

...

94,212

5,47,74,100

...

ಕೆನq

...

38,51,809

2,03,34,000

1867

ಆಸ್ಟ್ರೇಲಿಯ

...

29,67,909

1,16,51,340

1900

ನ್ಯೂಜಿûೀಲೆಂq

...

1,03,736

26,76,919

1901

ದ್ವೀಪ ಪ್ರದೇಶಗಳು

...

194

26,059

  

sgv

...

11,73,963

49,88,60,000

ಆಗಸ್ಟ್ 15, 1947

ಪಾಕಿಸ್ತಾನ

...

3,65,529

9,37,20,613

ಆಗಸ್ಟ್ 15, 1947

ಂಹಳ

...

25,332

1,15,04,100

sÉಬ್ರವರಿ 4, 1948

ಘಾನ

...

92,100

79,45,000

ಮಾರ್ಚಿ 6, 1957

ಸೈಪ್ರಸ್

...

3,572

6,07,000

ಆಗಸ್ಟ್ 16, 1960

ನ್ಶೆಜಿರಿಯ

...

3,65,669

5,56,70,000

ಅಕ್ಟೋಬg 1, 1960

ಸೀಯೆರ ಲಿಯೋನ್

...

27,925

21,83,000

ಏಪ್ರಿಲ್ 27, 1961

ಗಿಂಜûನೀಯ

...

3,63,708

1,01,79,000

ಡಿಸೆಂಬರ್ 9, 1961

ಜಮೇಕ

...

4,244

18,59,000

ಆಗಸ್ಟ್ 5, 1962

ಟ್ರಿನಿಡ್ಯಾq ಮತ್ತು ಟಬೇಗೋ

...

1,980

9,74,000

ಆಗಸ್ಟ್ 31, 1962

ಉUಂq

...

93,981

77,40,000

ಅಕ್ಟೋಬg 9, 1962

ಮಲೇಷ್ಯ

...

1,30,000

95,58,000

ಸೆಪ್ಟೆಂg 16, 1963

ಕೀನ್ಯ

...

2,24,960

96,43,000

ಡಿಸೆಂಬರ್ 12, 1963

ಮಲಾವಿ

...

45,747

40,42,412

ಜುಲೈ 6, 1964

ಮಾಲ್ಟ

...

121

3,23,591

ಸೆಪ್ಟೆಂg 21, 1964

eóÁಂಬಿಯ

...

2,90,586

38,94,636

ಅಕ್ಟೋಬg 24, 1964

Uಂಯ

...

4,003

3,15,486

sÉಬ್ರವರಿ 18, 1965

ಂಗಪುರ

...

224

19,39,600

ಅಕ್ಟೋಬg 16, 1965

ಗೈಯಾನ

...

83,000

6,55,000

ಮೇ 26, 1966

ಬಾಟ್‍ಸ್ವಾನ

...

2,20,000

5,76,000

ಸೆಪ್ಟೆಂg 30, 1966

ಲಸೋತೋ

...

11,716

9,76,000

ಅಕ್ಟೋಬg 4, 1966

ಬಾರ್ಬೇಡೋeóï

...

166

2,48,000

ನವೆಂಬರ್ 30, 1966

ಮಾರಿಷಸ್

...

808

7,68,700

ಮಾರ್ಚಿ 12, 1968

ಸ್ವಾಜಿûೀಲ್ಯಾಂq

...

6,705

3,90,000

ಸೆಪ್ಟೆಂg 6, 1968

 

ಆಶ್ರಿತ ಪ್ರದೇಶಗಳು

  

ಸರ್ಕಾgz ಸ್ವರೂಪ

ವಿಸ್ತೀರ್ಣ ಚ. ಮೈ.

ಜನಸಂಖ್ಯೆ

1

2

3

4

ಮಧ್ಯ ಆಫ್ರಿP:

      

ರೊಡೀಷಿಯ

ಂಡೆದ್ದಿರುವ

      

ವಸಾಹತು

1,50,820

44,57,000

ಚೂರಪ್ರಾಚ್ಯ:

      

ಬ್ರೂನೈ

gಕಿv gಜ

2,226

1,00,000

ಹಾಂಗ್ PಂU

ವಸಾಹತು ಮತ್ತು

      

ಗೇಣಿ ಪ್ರದೇಶಗಳು

398

36,98,400

ಂದೂ ಸಾUg:

      

ಬ್ರಿಟಿಷ್ ಂದೂಸಾಗರ

      

ಪ್ರದೇಶ

ವಸಾಹತು

150-200

15,000

ಸೇಷೆಲ್‍ಜ್ó

ವಸಾಹತು

156

47,424

ಮೆಡಿಟರೇನಿಯನ್:

      

ಜಿಬ್ರಾಲ್ಟg

ವಸಾಹತು

2

25,270

ಅಟ್ಲಾಂಟಿಕ್ ಸಾUg:

      

ಬ್ರಿಟಿಷ್ ಆಂmರ್ಕ್‍ಟಿಕ್

      

ಪ್ರದೇಶ

ವಸಾಹತು

4,72,000

24

sÁಲ್ಕ್‍ಲಂq ದ್ವೀಪಗಳು

ವಸಾಹತು

4,700

2,140

sÁಲ್ಕ್‍ಲಂq ದ್ವೀಪಗಳು

      

ಆಶ್ರಿತ ಪ್ರದೇಶಗಳು

ಆಶ್ರಿತ ವ್ಯವಸ್ಥೆ

1,520

182

ಸೇಂm ಹಲೀನ

ವಸಾಹತು

47

4,701

ಅಸೆಂಚನ್

  

34

478

ಟ್ರಿಸ್ಟನ್ ಡ ಕೂನ

  

38

265

ವೆಸ್ಟ್ ಇಂಡೀಸ್ ಮತ್ತು ಬಮ್ರ್ಯೂq:

      

ಬಹಾಮಾಸ್

ವಸಾಹತು

5,368

1,38,107

ಬಮ್ರ್ಯೂq

ವಸಾಹತು

21

48,799

ಬ್ರಿಟಿಷ್ ಹಾಂಡುರಸ್

ವಸಾಹತು

8,866

1,09,504

ಬ್ರಿಟಿಷ್ ವರ್ಜಿನ್ ದ್ವೀಪಗಳು

ವಸಾಹತು

67

8,600

ಕೇಮ್ಯಾನ್ ದ್ವೀಪಗಳು

ವಸಾಹತು

100

8,853

ಲೀವರ್ಡ್ ದ್ವೀಪಗಳು:

      

ಆಂಟಿಗ್ವ

ಸಹರಾಜ್ಯ

171

60,000

ಮಾಂಟ್ಸರ್ಯಾಟ್

ವಸಾಹತು

39

13,855

ಸೇಂm ಕ್ರಿಸ್ಟೋ¥sg, ನೆವಸ್ ಅಂಗ್ವಿಲ್ಲ

ಸಹರಾಜ್ಯ

138

59,000

ಐಕ್ರ್ಸ್ ಮತ್ತು ಕೇಕಸ್ ದ್ವೀಪಗಳು:

ವಸಾಹತು

166

6,770

ಂಡ್‍ವರ್ಡ್ ದ್ವೀಪಗಳು:

      

ಡಾಮನೀಕ

ಸಹರಾಜ್ಯ

305

66,900

ಗ್ರನ್ಭೆq

ಸಹರಾಜ್ಯ

133

93,000

ಸೇಂm ಲೂಸಿಯ

ಸಹರಾಜ್ಯ

238

1,00,000

ಸೇಂm ವಿನ್‍ಸೆಂm

ಸಹರಾಜ್ಯ

150

87,000

ಪಶ್ಚಿಮ ಪೆಸಿಫಿP:

      

ಫೀಜಿ

ವಸಾಹತು

7,095

4,69,934

mPಯರ್ನ್ ದ್ವೀಪಗಳು

ವಸಾಹತು

2

98

ಪಶ್ಚಿಮ ಪೆಸಿಫಿP ಹೈಕಮಿಷನ್:

      

ಬ್ರಿಟಿಷ್ ಸಾಲೊಮನ್ ದ್ವೀಪಗಳು

gಕಿv gಜ

11,500

1,39,730

ಗಿಲ್ಬರ್ಟ್ ಮತ್ತು ಎಲಸ್ ದ್ವೀಪಗಳು

ವಸಾಹತು

369

49,690

ನ್ಯೂ ಹೆಬ್ರಡಿಜ್ó 

ಆಂಗ್ಲೊ-sÉ್ರಂಚ್ ಸಹಪ್ರಭುತ್ವ 

5,700

66,000

ಒಂU

gಕಿv gಜ

270

73,729

 

ಮೂಲ: ದಿ ಯೂರೋಪ ಇಯರ್ ಬುಕ್, 1969

 ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಕಾರ್ಯವಿಧಾನ 

 ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯ ಒಂದು ಅನೌಪಚಾರಿಕ ಸಂಸ್ಥೆ. ಅಂದರೆ ನಿಗದಿಯಾದ ಕಾರ್ಯಕ್ರಮಗಳ ಪಟ್ಟಿಗಳನ್ನು ಹೊಂದಿರತಕ್ಕಂಥ ಸಂಸ್ಥೆಯಲ್ಲ. ಆದ್ದರಿಂದ ಕಾಮನ್‍ವೆಲ್ತ್ ರಾಷ್ಟ್ರಕೂಟ ಇಂಥದೇ ಕಾರ್ಯಗಳನ್ನು ನಿರ್ವಹಿಸುತ್ತದೆಯೆಂದು ಖಚಿತವಾಗಿ ಹೇಳುವುದು ಕಷ್ಟ. ಏಕತೆಗಿಂತ ವೈವಿಧ್ಯವೇ ಕಾಮನ್‍ವೆಲ್ತಿನ ಮುಖ್ಯ ಗುಣ. ವಿಭಿನ್ನ ರಾಷ್ಟ್ರಗಳು, ಜನಾಂಗಗಳು, ಭಾಷೆಗಳು ಮತ್ತು ಸಂಸ್ಕøತಿಗಳ ಸಂಗಮವಿದು. ಈ ಒಕ್ಕೂಟದಲ್ಲಿ ರಾಜಪ್ರಭುತ್ವವಿದೆ. ಪ್ರಜಾಪ್ರಭುತ್ವವನ್ನು ಒಪ್ಪಿರುವ ಗಣರಾಜ್ಯಗಳಿವೆ. ಮಿಲಿಟರಿ ಆಳ್ವಿಕೆಗೆ ಒಳಗಾಗಿರುವ ರಾಷ್ಟ್ರಗಳಿವೆ. ಇವುಗಳ ವಿದೇಶಾಂಗನೀತಿಯಲ್ಲೂ ಅದೇ ರೀತಿಯ ವೈವಿಧ್ಯವನ್ನು ಕಾಣಬಹುದು. ಉದಾಹರಣೆಗೆ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಭಾರತದ್ದು ಅಲಿಪ್ತ ನೀತಿ; ಆಸ್ಟ್ರೀಲಿಯ, ನ್ಯೂಜಿûೀಲೆಂಡ್‍ಗಳು ಸಾಮಾನ್ಯವಾಗಿ ಬ್ರಿಟನ್ ಅನುಸರಿಸುವ ನೀತಿಯನ್ನೇ ಅನುಸರಿಸುತ್ತವೆ. ಹೀಗಿದ್ದರೂ ಈ ಸದಸ್ಯ ರಾಷ್ಟ್ರಗಳ ಮಧ್ಯೆ ಸಾಮಾನ್ಯ ದೃಷ್ಟಿಕೋನ ಮತ್ತು ಉದ್ದೇಶಗಳನ್ನು ಕಂಡುಹಿಡಿಯುವುದು ಕಷ್ಟವಿಲ್ಲ. ಎಲ್ಲರೂ ಒಪ್ಪುವ ಉದ್ದೇಶಗಳನ್ನು ಕಾಮನ್‍ವೆಲ್ತ್ ಹೊಂದಿರುವುದರಿಂದ ಅದು ಇಂದಿಗೂ ಬದುಕಿ ಉಳಿದಿದೆ.

 ಎರಡನೆಯ ಮಹಾಯುದ್ಧಕ್ಕೆ ಹಿಂದೆ ಕಾಮನ್‍ವೆಲ್ತಿನಲ್ಲಿದ್ದ ರಾಷ್ಟ್ರಗಳ ಸಂಖ್ಯೆ ಬಹು ಕಡಿಮೆ. ಮುಖ್ಯವಾಗಿ ಆಸ್ಟ್ರೇಲಿಯ, ನ್ಯೂಜಿûೀಲೆಂಡ್, ಕೆನಡ ಮತ್ತು ದಕ್ಷಿಣ ಆಫ್ರಿಕಗಳು ಕಾಮನ್‍ವೆಲ್ತಿನ ಕಾಮನ್‍ವೆಲ್ತಿನ ಸದಸ್ಯ ರಾಷ್ಟ್ರಗಳಾಗಿದ್ದುವು. ಈ ರಾಷ್ಟ್ರಗಳ ಹೆಚ್ಚಿನ ಜನ ಬ್ರಿಟಿಷ್ ಸಂಜಾತರು. ಆದ್ದರಿಂದ ಅವರ ಮಧ್ಯೆ ಸಾಮಾನ್ಯ ಉದ್ದೇಶಗಳನ್ನು ಕಂಡುಹಿಡಿಯುವುದು ಸುಲಭವಾಗಿತ್ತು. ಈಗ ಕಾಮನ್‍ವೆಲ್ತ್ ಸಮುದಾಯದ ಪ್ರಧಾನ ಮಂತ್ರಿಗಳ ಸಭೆ ಸೇರುವಂತೆ, ಎರಡನೆಯ ಮಹಾಯುದ್ಧಕ್ಕಿಂತ ಮುಂಚೆ ಸಾಮ್ರಾಜ್ಯ ಸಮ್ಮೇಳನಗಳು ಸೇರುತ್ತಿದ್ದುವು. ಈ ಸಭೆಗೆ ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳು ತಮ್ಮ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದುವು. ಬ್ರಿಟಿಷ್ ಸಾಮ್ರಾಜ್ಯದ ಶಾಂತಿ, ಯುದ್ಧ, ಆರ್ಥಿಕ ಅಭಿವೃದ್ಧಿ ಹಾಗೂ ರಕ್ಷಣೆಗೆ ಸಂಬಂಧಿಸಿದಂತೆ ಬರುವ ಸಮಸ್ಯೆಗಳನ್ನು ಚರ್ಚಿಸಲಾಗುತ್ತಿತ್ತು. ಈ ಸಭೆಗಳಲ್ಲಿ ಒಮ್ಮತ ಸುಲಭಸಾಧ್ಯವಾಗಿತ್ತು.

 ಆದರೆ ಎರಡನೆಯ ಮಹಾಯುದ್ಧದ ತರುವಾಯ ಕಾಮನ್‍ವೆಲ್ತ್ ರಾಷ್ಟ್ರಕೂಟದ ರಚನೆಯಲ್ಲಿ ವ್ಯತ್ಯಾಸವಾಗಿದೆ. ಹಿಂದಿದ್ದ ಸರಳತೆ ಮಾಯವಾಗಿ ಸಂಕೀರ್ಣತೆ ವೈವಿದ್ಯಗಳು ಪ್ರಧಾನವಾಗಿವೆ. ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಕಾಮನ್‍ವೆಲ್ತ್ ರಾಷ್ಟ್ರಕೂಟದಲ್ಲಿ ಸದಸ್ಯತ್ವ ಗಳಿಸಿಕೊಂಡಾಗ, ಸಂಕೀರ್ಣತೆ ಏರ್ಪಟ್ಟಿತ್ತು. ಹಾಗೆಂದ ಮಾತ್ರಕ್ಕೆ ಸರ್ವೇಸಾಮಾನ್ಯವಾದ ಎಲ್ಲರೂ ಒಪ್ಪುವಂಥ ಕಾರ್ಯಕ್ರಮಗಳನ್ನು ರಚಿಸಲು ಅಸಾಧ್ಯವಾಯಿತೆಂದೇನೂ ಅಲ್ಲ. ಹಿಂದೆ ಇದ್ದದ್ದಕ್ಕಿಂತ ಈಗ ಸಾಮಾನ್ಯ ಉದ್ದೇಶಗಳು ಕಡಿಮೆಯಾಗಿವೆ.

 ಕಾಮನ್‍ವೆಲ್ತ್ ಸಮುದಾಯ ಇಂದು ಎಷ್ಟೇ ಸಂಕೀರ್ಣವಾಗಿದ್ದರೂ ಅನೇಕ ವಿಷಯಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತವಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವೂ ಕಾಮನ್‍ವೆಲ್ತ್ ಸಮುದಾಯದಿಂದ ತನಗೆ ಲಾಭವಿದೆ ಎಂಬ ಅಂಶವನ್ನು ಅಥವಾ ಲಾಭವಿಲ್ಲದಿದ್ದರೂ ನಷ್ಟವಿಲ್ಲವೆಂಬುದನ್ನು ಮನಗಂಡಿದೆ. ಸಮುದಾಯದ ಅನೇಕ ರಾಷ್ಟ್ರಗಳು ಈಚೆಗೆ ರಾಜಕೀಯ ಸ್ವಾತಂತ್ರ್ಯ ಗಳಿಸಿ, ಆರ್ಥಿಕವಾಗಿ ತಮ್ಮ ಕಾಲುಗಳ ಮೇಲೆ ತಾವೇ ನಿಂತುಕೊಳ್ಳುವ ಪ್ರಯತ್ನದಲ್ಲಿವೆ. ಇಂದಿಗೂ ಈ ರಾಷ್ಟ್ರಗಳ ಆರ್ಥಿಕಾಭಿವೃದ್ಧಿಗೆ ಬ್ರಿಟನ್ ಬಂಡವಾಳವನ್ನೂ ತಾಂತ್ರಿಕ ನೆರವನ್ನೂ ಒದಗಿಸುತ್ತಿದೆ. ಆರ್ಥಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ ಎಂಬ ಸತ್ಯವನ್ನು ಮನಗಂಡ ಈ ರಾಷ್ಟ್ರಗಳು ಕಾಮನ್‍ವೆಲ್ತ್ ಸಮುದಾಯದಿಂದ ಸಾಧ್ಯವಾದಷ್ಟು ನೆರವು ಪಡೆಯಲು ಆಶಿಸಿವೆ.

 ಇದಲ್ಲದೆ ಮತ್ತೊಂದು ಅಂಶ ಕಾಮನ್‍ವೆಲ್ತಿನ ಕಾರ್ಯಕ್ರಮವನ್ನು ಸರಳಗೊಳಿಸಲು ಕಾರಣವಾಗಿದೆ. ಕಾಮನ್‍ವೆಲ್ತಿನ ಅನೇಕ ರಾಷ್ಟ್ರಗಳ ನಾಣ್ಯ ಪದ್ಧತಿಗೆ ಬ್ರಿಟಿಷ್ ಸ್ಟರ್ಲಿಂಗೇ ಆಧಾರ. ಬ್ರಿಟನಿನ ಪೌಂಡಿಗೆ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಉನ್ನತ ಸ್ಥಾನವಿತ್ತು. ಈಗಲೂ ಅದಕ್ಕೆ ತಕ್ಕಮಟ್ಟಿನ ಪ್ರಾಮುಖ್ಯವುಂಟು.

 

ಚಿತ್ರ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲೊಂದಾದ ವೆಸ್ಟ್ ಇಂಡೀಸಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಡುವೆ ಬ್ರಿಟಿಷ್ ರಾಣಿ

 

ಅದರ ಮೌಲ್ಯವನ್ನು ಕಾಪಾಡಿಕೊಂಡು ಬರುವುದು ಅನೇಕ ರಾಷ್ಟ್ರಗಳ ಆರ್ಥಿಕ ಆರೋಗ್ಯಕ್ಕೆ ಆವಶ್ಯಕ. ಹಲವು ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಸಾಮಾನ್ಯವಾಗಿರುವ ಅಂಶಗಳಲ್ಲಿ ಇದೂ ಒಂದು.

 ಇಂದು ಕಾಮನ್‍ವೆಲ್ತ್ ರಾಷ್ಟ್ರಸಮುದಾಯ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಸದಸ್ಯ ರಾಷ್ಟ್ರಗಳ ಸಮಾಲೋಚನೆ ಸಹಕಾರಗಳನ್ನು ನಡೆಸಿಕೊಂಡು ಬರುವ ವೇದಿಕೆಯಾಗಿದೆ ಭಿನ್ನ ಜನಾಂಗದವರಿಗೆ ಇದೊಂದು ಸಾಮಾನ್ಯ ವೇದಿಕೆ. ಇಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಪರರ ಅಭಿಪ್ರಾಯವನ್ನು ಒಪ್ಪಲೇಬೇಕೆಂಬ ನಿಯಮವಿಲ್ಲ. ಅನೌಪಚಾರಿಕ ಸಭೆ ಇದರ ಲಕ್ಷಣ. ಇಂಗ್ಲಿಷ್ ಭಾಷೆ, ಸಂಸ್ಕøತಿ, ಸಂಸ್ಥೆ, ಕಾನೂನುಗಳನ್ನು ಮೈಗೂಡಿಸಿಕೊಂಡ ಸದಸ್ಯ ರಾಷ್ಟ್ರಗಳ ಜನನಾಯಕರು ಕಾಮನ್‍ವೆಲ್ತ್ ಸಭೆಗಳಲ್ಲಿ, ಕಾರ್ಯಕ್ಷೇತ್ರಗಳಲ್ಲಿ ಸಮಾಲೋಚನೆ ನಡೆಸಬಹುದಾಗಿದೆ.

 ಕಾಮನ್‍ವೆಲ್ತ್ ಸಭೆಗಳ ಮತ್ತೊಂದು ಪ್ರಧಾನಗುಣವೆಂದರೆ, ಅಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ರೀತಿ. ಆ ಸಭೆಗಳಲ್ಲಿ, ಉಳಿದ ಸಭೆಗಳಲ್ಲಿರುವಂತೆ, ಮತ ನೀಡಿ, ಅವುಗಳ ಎಣಿಕೆ ಮಾಡಿ, ಯಾವ ತೀರ್ಮಾನಕ್ಕೆ ಹೆಚ್ಚಿನ ಮತ ಬರುತ್ತದೋ ಅದನ್ನು ಪಾಲಿಸಿಕೊಂಡು ಬರುವ ಪದ್ಧತಿ ಇಲ್ಲ. ಈ ಸಭೆಗಳಲ್ಲಿ ವಿವಿಧ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಸರ್ವಸಮ್ಮತ ತೀರ್ಮಾನ ಕೈ ಕೊಳ್ಳುವ ಪದ್ಧತಿ ಜಾರಿಯಲ್ಲಿದೆ. ಇದರಿಂದ ಸದಸ್ಯರಲ್ಲಿ ಗಲಾಟೆ, ಗಲಭೆ ಕಡಿಮೆ.

 ಬ್ರಿಟನ್ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡಾಗ ಅದರ ಪ್ರಭಾವ ಮತ್ತು ಪ್ರತಿಷ್ಠೆಗಳಿಗೆ ಕುಂದುಂಟಾಯಿತು. ಆದರೆ ಈ ನಷ್ಟ ಸ್ವಲ್ಪಮಟ್ಟಿಗೆ, ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಉದಯದಿಂದ ಕಡಿಮೆಯಾಯಿತು. ಬಂಡವಾಳ ನಿಯೋಜನೆ, ವ್ಯಾಪಾರ, ಉದ್ಯಮ, ಕ್ರೀಡಾಂಗ, ಸಾಂಸ್ಕøತಿಕವೇ ಮೊದಲಾದ ಸಂಪರ್ಕಗಳಿಂದ ಬ್ರಿಟನ್ ತನ್ನ ಸಂಬಂಧವನ್ನು ಈ ದೇಶಗಳೊಡನೆ ಉಳಿಸಿಕೊಂಡು ಬಂದಿದೆ. ಬ್ರಿಟನ್ ಯೂರೋಪಿನ ಕಡೆ ಹೆಚ್ಚಿಗೆ ಗಮನ ಕೊಡದೆ, ಕಾಮನ್‍ವೆಲ್ತ್ ರಾಷ್ಟ್ರಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕೇ ವಿನಾ ಉಳಿದ ರಾಷ್ಟ್ರಗಳ ಕಡೆಗಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಅದು ಹೇಗಿದ್ದರೂ ಕಾಮನ್‍ವೆಲ್ತ್ ಸಮುದಾಯ ತನ್ನ ಸಂಬಂಧಗಳನ್ನು ಪರ ರಾಷ್ಟ್ರಗಳೊಡನೆ ಕುದುರಿಸಿಕೊಳ್ಳಲು ಉತ್ತವ ಮಾಧ್ಯಮ.

 ಕಾಮನ್‍ವೆಲ್ತಿನ ಅಂಗಗಳು 

 ಕಾಮನ್‍ವೆಲ್ತಿಗೆ ನಿರ್ದಿಷ್ಟವಾದ ಯಾವ ಅಂಗಸಂಸ್ಥೆಗಳೂ ಇರಲಿಲ್ಲ. ಕಾಮನ್‍ವೆಲ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಅವುಗಳ ಮುಖಂಡರ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು. 1965ರಲ್ಲಿ ಸಮುದಾಯದ ಕೇಂದ್ರ ಆಡಳಿತ ಕಚೇರಿಯನ್ನು ಸ್ಥಾಪಿಸಲಾಯಿತು. ಕಾಮನ್‍ವೆಲ್ತಿನ ಮುಖ್ಯ ಅಂಗಗಳು ಇವು: 1 ಕಾರ್ಯಾಲಯ, 2 ಕಾಮನ್‍ವೆಲ್ತ್ ಸಭೆಗಳು. 3 ಕಾಮನ್‍ವೆಲ್ತ್ ಸಂಬಂಧಗಳ ಕಛೇರಿ. 4 ಹೈ ಕಮಿಷನ್‍ಗಳು.

 ಕಾರ್ಯಾಲಯ: ಕಾಮನ್‍ವೆಲ್ತ್ ಕಾರ್ಯಾಲಯವನ್ನು 1965ರಲ್ಲಿ ಲಂಡನಿನಲ್ಲಿ ಸ್ಥಾಪಿಸಲಾಯಿತು. ಮಹಾಕಾರ್ಯದರ್ಶಿಯೇ ಇದರ ಮುಖ್ಯಸ್ಥ. ಕಾರ್ಯಾಲಯದ ಕಾರ್ಯ ಮೂರು ಬಗೆ: 1 ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿಯ ಸಂಗ್ರಹಣ ಮತ್ತು ವಿತರಣ, 2 ವಿವಿಧ ಕ್ಷೇತ್ರಗಳಲ್ಲಿ ಕಾಮನ್‍ವೆಲ್ತಿನ ಉದ್ದೇಶಗಳನ್ನು ನಿರ್ವಹಿಸುವಲ್ಲಿ ಅಗತ್ಯವಾದ ಸಹಾಯದ ನೀಡಿಕೆ. 3 ಸದಸ್ಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳ ಸಭೆ ನಡೆಸಲು ಕ್ರಮ ಕೈಕೊಳ್ಳುವುದು. ಇಂಗ್ಲೆಂಡಿನ ಹೊರಗೆ ಈ ಸಭೆ ನಡೆದಾಗ, ಆ ದೇಶದವರ ಸಹಕಾರದಿಂದ ಸಭೆ ಏರ್ಪಡಿಸಬೇಕಾಗುತ್ತದೆ. ಕಾರ್ಯಾಲಯದ ಸಿಬ್ಬಂದಿಯನ್ನು ಸದಸ್ಯರಾಷ್ಟ್ರಗಳಿಂದ ಆರಿಸಲಾಗುತ್ತದೆ. ಕಾರ್ಯಾಲಯ ಮುಖ್ಯವಾಗಿ ಸದಸ್ಯ ರಾಷ್ಟ್ರಗಳ ವಿನಿಮಯ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ.

 ಕಾಮನ್‍ವೆಲ್ತ್ ಸಭೆಗಳು: ಆಗಾಗ್ಗೆ ನಡೆಯುವ ಕಾಮನ್‍ವೆಲ್ತ್ ಸಭೆಗಳಲ್ಲಿ ಪ್ರಧಾನಮಂತ್ರಿಗಳ, ಹಣಕಾಸು ಸಚಿವರ ಮತ್ತು ವಾಣಿಜ್ಯ ಮಂತ್ರಿಗಳ ಸಭೆಗಳು ಮುಖ್ಯವಾದವು. ಪ್ರಧಾನ ಮಂತ್ರಿಗಳ ಸಭೆಗಳು ಸಾಮಾನ್ಯವಾಗಿ ಸದಸ್ಯತ್ವ, ಕಾಮನ್‍ವೆಲ್ತಿನ ಕಾನೂನುಗಳು ಮೊದಲಾದ ವಿಷಯಗಳನ್ನು ಚರ್ಚಿಸುತ್ತವೆ. ಈ ಸಭೆಗಳಲ್ಲಿ ವಿದೇಶಾಂಗ ನೀತಿಯ ಬಗ್ಗೆ ಚರ್ಚೆ ನಡೆಯುತ್ತದೆ. ಒಮ್ಮತ ಬಹು ಅಪರೂಪ. ಪ್ರಧಾನ ಮಂತ್ರಿಗಳು ಸಮಾಲೋಚನೆ ನಡೆಸಿದ ಮೇಲೆ ಅದರ ಪರಿಣಾಮವನ್ನು ಒಂದು ಹೇಳಿಕೆಯಲ್ಲಿ ಪ್ರಕಟಿಸಲಾಗುತ್ತದೆ. ವಾದಗ್ರಸ್ತ ವಿಚಾರಗಳನ್ನು ಆದಷ್ಟು ಮಟ್ಟಿಗೆ ಪರ್ಯಾಲೋಚನೆಗೆ ತೆಗೆದುಕೊಳ್ಳದಿರುವುದೇ ಕಾಮನ್‍ವೆಲ್ತ್ ಸಭೆಗಳ ಒಂದು ವಿಶೇಷ. ಉದಾಹರಣೆ: ಕಾಶ್ಮೀರ ಸಮಸ್ಯೆ. ಭಾರತ ಪಾಕಿಸ್ತಾನಗಳೆರಡೂ ಕಾಮನ್‍ವೆಲ್ತ್ ರಾಷ್ಟ್ರಗಳಾಗಿದ್ದರೂ ಈ ಬಗ್ಗೆ ಸಮಾಲೋಚನೆ ನಡಿಸಿಲ್ಲ, ಪರಿಹಾರ ಸೂಚಿಸಿಲ್ಲ. ವಿವಿಧ ರಾಷ್ಟ್ರಗಳ ನಾಯಕರು ಒಂದೆಡೆ ಸೇರುವುದೇ ಇದರ ಒಂದು ವೈಶಿಷ್ಟ್ಯ. ವಿಶ್ವಸಂಸ್ಥೆಯನ್ನು ಬಿಟ್ಟರೆ ಬೇರಾವ ಸಭೆಯೂ ಇಷ್ಟೊಂದು ವ್ಯಾಪಕರೂಪದ್ದಲ್ಲ. ಆದ್ದರಿಂದ ವಿಶ್ವಸಮಸ್ಯೆಗಳ ಪರ್ಯಾಲೋಚನೆಗೆ ಇದೊಂದು ಮುಖ್ಯ ವೇದಿಕೆ.

 ಕಾಮನ್‍ವೆಲ್ತ್ ಸಂಬಂಧಗಳ ಕಚೇರಿ: ಬ್ರಿಟಿಷ್ ಸರ್ಕಾರದ ಸಂಪುಟಕ್ಕೆ ಅಧೀನವಾದ ಕಚೇರಿ ಇದು. ಇದನ್ನು 1947ರಲ್ಲಿ ಸ್ಥಾಪಿಸಲಾಯಿತು. ಇದಲ್ಲದೆ ವಸಾಹತುಗಳ ಕಚೇರಿ ಎಂಬುದೊಂದಿತ್ತು. ಇದು ವಸಾಹತುಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿತ್ತು. ಈ ಎರಡು ಕಚೇರಿಗಳನ್ನೂ 1966ರಲ್ಲಿ ಒಂದುಗೂಡಿಸಲಾಯಿತು. ಹೊಸ ಕಾಮನ್‍ವೆಲ್ತ್ ಸಂಬಂಧಗಳ ಕಚೇರಿ ಉದಯವಾಯಿತು. ಈ ಕಚೇರಿಯ ಮುಖ್ಯಾಧಿಕಾರಿ ಕಾಮನ್‍ವೆಲ್ತ್ ವ್ಯವಹಾರಗಳ ಸಚಿವ. ಕಾಮನ್‍ವೆಲ್ತಿನ ಬೇರೆ ಯಾವ

 

ಚಿತ್ರ ಕಾಮನ್‍ವೆಲ್ತ್ ಕಲೆಗಳ ಉತ್ಸವ (1965) ಟ್ರಫಾಲ್ಗರ್ ಚೌಕದಲ್ಲಿ ಮಾವೊರಿ ಕುಣಿತ

 

ಸದಸ್ಯ ರಾಷ್ಟ್ರದಲ್ಲೂ ಇಂಥ ಖಾತೆ ಇಲ್ಲ. ಉಳಿದ ದೇಶಗಳಲ್ಲಿ ಕಾಮನ್‍ವೆಲ್ತ್ ವ್ಯವಹಾರಗಳನ್ನು ವಿದೇಶಾಂಗ ವ್ಯವಹಾರಗಳ ಖಾತೆಯೇ ನೋಡಿಕೊಳ್ಳುತ್ತದೆ. ಅನೇಕ ರಾಷ್ಟ್ರಗಳಲ್ಲಿ ವಿದೇಶಾಂಗ ವ್ಯವಹಾರದ ವಿಭಾಗದಲ್ಲೇ, ಕಾಮನ್‍ವೆಲ್ತ್ ವ್ಯವಹಾರಗಳನ್ನು ನೋಡಿಕೊಳ್ಳುವ ಮತ್ತೊಂದು ವಿಭಾಗವಿರುವುದೂ ಉಂಟು.

 ಹೈ ಕಮಿಷನ್‍ಗಳು ; ಒಂದು ಕಾಮನ್‍ವೆಲ್ತ್ ಸದಸ್ಯರಾಷ್ಟ್ರದಲ್ಲಿರುವ ಮತ್ತೊಂದು ಸದಸ್ಯರಾಷ್ಟ್ರದ ರಾಯಭಾರಿ ಕೇರಿಯನ್ನು ಹೈ ಕಮಿಷನ್ (ಉಚ್ಚ ಆಯೋಗ) ಎಂದು ಕರೆಯಲಾಗುತ್ತದೆ. ಇದರ ಮುಖ್ಯಸ್ಥ ಹೈ ಕಮಿಷನರ್. ಹೈ ಕಮಿಷನರನ ಸ್ಥಾನ ರಾಯಭಾರಿಯದಕ್ಕಿಂತ ಉನ್ನತವಾದ್ದು. ಇವನು ಆ ದೇಶದ ಪ್ರಧಾನಮಂತ್ರಿಯನ್ನು ನೇರವಾಗಿ ಭೇಟಿ ಮಾಡುವ ಆಧಿಕಾರ ಪಡೆದಿರುತ್ತಾನೆ. ರಾಯಭಾರಿಗಳಿಗೆ ಈ ಸೌಲಭ್ಯವಿಲ್ಲ. ಅವರು ವಿದೇಶಿ ವ್ಯವಹಾರಗಳ ಮಂತ್ರಿಗಳನ್ನು ಮಾತ್ರ ನೇರವಾಗಿ ಭೇಟಿಯಾಗಬಹುದು. ಲಂಡನಿನಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ದೊಡ್ಡ ದೊಡ್ಡ ಕಚೇರಿಗಳಿವೆ. ಕಾಮನ್‍ವೆಲ್ತಿಗೆ ಸಂಬಂಧಪಟ್ಟ ವ್ಯವಹಾರಗಳು ನಡೆಯುವುದು ಹೈ ಕಮಿಷನಿನ ಮೂಲಕ.

 ಸಂಪರ್ಕದ ಅಭಿವೃದ್ಧಿ ; ಆಧುನಿಕ ಪ್ರಪಂಚದಲ್ಲಿ ಸಂಪರ್ಕ ಸಾರಿಗೆಗಳು ಮಹತ್ತ್ವದ ಪಾತ್ರ ವಹಿಸಿವೆ. ಆರ್ಥಿಕಾಭಿವೃದ್ಧಿಗೆ ನರನಾಡಿಗಳಂತಿರುವ ಇವುಗಳ ಬೆಳೆವಣಿಗೆಗೂ ಕಾಮನವೆಲ್ತ್ ರಾಷ್ಟ್ರಸಮುದಾಯ ಸಾಕಷ್ಟು ಕೆಲಸ ಮಾಡುತ್ತಿದೆ. ವಾಣಿಜ್ಯ ನೌಕೆಯನ್ನು ಉತ್ತಮ ಪಡಿಸುವುದು, ಹಡಗು ಸಾರಿಗೆಯನ್ನು ಸರಳಗೊಳಿಸುವುದು ಮೊದಲಾದ ಕೆಲಸಗಳನ್ನು ಕಾಮನ್‍ವೆಲ್ತ್ ಹಡಗು ಸಾರಿಗೆ ಸಮಿತಿ ನೋಡಿಕೊಳ್ಳುತ್ತದೆ.

 ರಕ್ಷಣೆ : ಅನೇಕ ಕಾಮನ್‍ವೆಲ್ತ್ ರಾಷ್ಟ್ರಗಳು ರಕ್ಷಣೆಯ ಸಲುವಾಗಿ ಬ್ರಿಟನಿನೊಡನೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ರಾಷ್ಟ್ರಗಳ ಪೈಕಿ ವಿಶ್ವದ ವಿವಿಧ ಮಿಲಿಟರಿ ಒಕ್ಕೂಡಗಳ ಸದಸ್ಯ ರಾಷ್ಟ್ರಗಳೂ ಉಂಟು. ಬ್ರಿಟನ್ ಮತ್ತು ಕೆನಡ ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆಯ ಸದಸ್ಯ ರಾಷ್ಟ್ರಗಳು. ಆಸ್ಟ್ರೇಲಿಯ, ನ್ಯೂಜೀóಲೆಂಡ್, ಬ್ರಿಟನ್ ಮತ್ತು ಪಾಕಿಸ್ತಾನಗಳಿಗೆ ಆಗ್ನೇಯ ಏಷ್ಯ ಕೌಲು ಸಂಸ್ಥೆಯ ಸದಸ್ಯತ್ವವಿದೆ. ಬ್ರಿಟನ್ನು ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಮಿಲಿಟರಿ ನೆರವನ್ನು ನೀಡುವುದಲ್ಲದೆ, ಆ ದೇಶಗಳ ಸೈನ್ಯ ಶಿಕ್ಷಣಕ್ಕೆ ಸಹಾಯ ಒದಗಿಸುತ್ತದೆ. ಅನೇಕ ರಾಷ್ಟ್ರಗಳು ಬ್ರಿಟನಿನ ಮಿಲಿಟರಿ ಕಾಲೇಜುಗಳಲ್ಲಿರುವ ಸೌಲಭ್ಯಗಲನ್ನು ಪಡೆದು ತಮ್ಮ ಸೈನಾಧಿಕಾರಿಗಳಿಗೆ ತರಬೇತಿ ಕೊಡಿಸುತ್ತವೆ. ಕಾಮನ್‍ವೆಲ್ತ್ ಒಂದು ಮಿಲಿಟರಿ ಒಕ್ಕೂಟವಲ್ಲದಿದ್ದರೂ ಇತರ ರಾಷ್ಟ್ರಗಳ ಆಕ್ರಮಣಕ್ಕೆ ತುತ್ತಾದಾಗ ನೆರವು ನೀಡಲು ಬ್ರಿಟನ್ ಮುಂದೆ ಬರಬಹುದು. ಆಸ್ಟ್ರೇಲಿಯ ಮತ್ತು ನ್ಯೂಜಿóೀಲೆಂಡ್‍ಗಳಿಗೆ ಬ್ರಿಟನಿನ ಮಿಲಿಟರಿ ನೆರವು ಉಂಟು. ಚೀನ 1962 ರಲ್ಲಿ ಭಾರತದ ಗಡಿಯ ಆಕ್ರಮಣ ನಡೆಸಿದಾಗ ಬ್ರಿಟನ್, ಆಸ್ಟ್ರೇಲಿಯ ಮತ್ತು ನ್ಯೂಜಿóೀಲೆಂಡ್ ಸಹಾಯ ಮಾಡಿದುವು.

 ವಿದ್ಯಾಭ್ಯಾಸ ಮತ್ತು ವಿಜ್ಞಾನ ಕ್ಷೇತ್ರಗಳು; ಈ ಕ್ಷೇತ್ರಗಳಲ್ಲೂ ಸಹಕಾರ ಎದ್ದು ಕಾಣುತ್ತದೆ. ಬ್ರಿಟನಿನ ಶಿಕ್ಷಣ ಪದ್ಧತಿ ಉಳಿದ ರಾಷ್ಟ್ರಗಳಿಗೆ ಮಾದರಿ. ಬ್ರಿಟನಿನ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಉಳಿದ ಕಡೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. 1931 ರಲ್ಲಿ ಸ್ಥಾಪಿತವಾದ ಕಾಮನ್‍ವೆಲ್ತ್ ವಿಶ್ವವಿದ್ಯಾಲಯಗಳ ಸಂಘ ಶಿಕ್ಷಣಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ. ಆಫ್ರೀಕದಲ್ಲಿರುವ ಕಾಮನ್‍ವೆಲ್ತ್ ದೇಶಗಳಲ್ಲಿ ಹೊಸ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಬ್ರಿಟನ್ ಸಹಾಯ ನೀಡಿತು. 1959 ರಲ್ಲಿ ಕಾಮನ್‍ವೆಲ್ತ್ ಶಿಕ್ಷಣ ಸಮ್ಮೇಳನ ಬ್ರಿಟನಿನ ಆಕ್ಸ್‍ಫರ್ಡಿನಲ್ಲಿ ನಡೆಯಿತು. ಹೆಚ್ಚಿನ ಶಿಕ್ಷಣಕ್ಕಾಗಿ ಅರ್ಹರಾದ ವಿದ್ಯಾರ್ಥಿಗಳಿಗೆ ನೀಡಲು 1,000 ವಿದ್ಯಾರ್ಥಿವೇತನಗಳನ್ನು ಈ ಸಮ್ಮೇಳನದಲ್ಲಿ ನಿರ್ಮಿಸಲಾಯಿತು. ಇದರಲ್ಲಿ ಅರ್ಧವನ್ನು ಬ್ರಿಟನ್ ನೀಡಿತು. ಕೆನಡದ್ದು ಕಾಲು ಭಾಗ. ಉಳಿದುದರಲ್ಲಿ ಹೆಚ್ಚಿನ ಭಾಗವನ್ನು ಭಾರತ, ಆಸ್ಟ್ರೇಲಿಯ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‍ಗಳು ಕೊಟ್ಟವು. ಶಿಕ್ಷಕರ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಈ ಸಮ್ಮೇಳನ ಸೂಚನೆ ನೀಡಿತು. ಇದಕ್ಕೆ ಅನುಗುಣವಾಗಿ ಅನೇಕ ರೀತಿಗಳಲ್ಲಿ ಪ್ರಗತಿಗಳಾಗುತ್ತಿವೆ. ಇದರ ಸಭೆ 1962 ರಲ್ಲಿ ದೆಹಲಿಯಲ್ಲೂ 1964 ಅಟ್ಟಾವದಲ್ಲೂ ನಡೆಯಿತು. ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ವಿಜ್ಞಾನದ ಬೆಳೆವಣಿಗೆ ಮತ್ತು ಸಂಶೋಧನೆ. ವಿಜ್ಞಾನಿಗಳಲ್ಲಿ ಸೌಹಾರ್ದ ಸಂಬಂಧ ಸ್ಥಾಪನೆ, ವಿಜ್ಞಾನದ ಬಗ್ಗೆ ವಿಚಾರಗೋಷ್ಠಿಗಳ ಏರ್ಪಾಡು- ಇವು ಕಾಮನ್‍ವೆಲ್ತ್ ವೈಜ್ಞಾನಿಕ ಸಮಿತಿಯ ಕಾರ್ಯಭಾರಗಳು.

 ನ್ಯಾಯವ್ಯವಸ್ಥೆ : ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಸದಸ್ಯ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಬ್ರಿಟಿಷ್ ಮಾದರಿಯ ನ್ಯಾಯವ್ಯವಸ್ಥೆ ಬಳಕೆಯಲ್ಲಿದೆ. ಕಾನೂನಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪರ್ಯಾಲೋಚಿಸಲು ಅನುಕೂಲವಾಗುವಂತೆ ಕಾನೂನಿನ ಸಭೆಗಳನ್ನು ಕಾಮನ್‍ವೆಲ್ತ್ ಆಗಾಗ್ಗೆ ನಡೆಸುತ್ತದೆ. ಇಂಥ ಅಧಿವೇಶನಗಳು 1955 ರಲ್ಲಿ ಲಂಡನ್ನಿನಲ್ಲೂ 1960 ರಲ್ಲಿ ಕೆನಡದ ಅಟ್ಟಾವದಲ್ಲೂ 1965 ರಲ್ಲಿ ಸಿಡ್ನಿಯಲ್ಲೂ ನಡೆದುವು.

 ಪೌರತ್ವ ; ಪೌರತ್ವದ ಬಗ್ಗೆ ಈ ಸಮುದಾಯ ಅನೇಕ ಸೌಲಭ್ಯಗಳನ್ನು ಸದಸ್ಯ ರಾಷ್ಟ್ರಗಳಿಗೆ ಒದಗಿಸಿಕೊಡುತ್ತದೆ. ಬ್ರಿಟನಿಗೆ ಕಾಮನ್‍ವೆಲ್ತ್ ರಾಷ್ಟ್ರಗಳಿಂದ ಅನೇಕ ಜನ ವಲಸೆ ಹೋಗಿದ್ದಾರೆ. ಆದರೆ ಬ್ರಿಟನಿಗೆ ಬರುವ ವಲಸೆಗಾರರ ಬಗ್ಗೆ ಆ ದೇಶ ನಿರ್ಬಂಧಗಳನ್ನು ವಿಧಿಸಿರುವುದರಿಂದ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಅಸಮಾಧಾನ ತಲೆದೋರಿದೆ. ಇದಲ್ಲದೆ, ಪ್ರವಾಸಿಗಳಿಗೆ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ ಅನೇಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

 ಕಾಮನ್ ವೆಲ್ತಿನ ವಿಕಾಸ  ಕಾಮನ್‍ವೆಲ್ತ್ ರಾಷ್ಟ್ರಸಮುದಾಯ ಬ್ರಿಟಿಷ್ ಸಾಮ್ರಾಜ್ಯದಿಂದ ವಿಕಾಸಗೊಂಡಿತು. ಹತ್ತೊಂಬತ್ತನೆಯ ಶತಮಾನದ ಕೊನೆ ಹಾಗೂ ಇಪ್ಪತ್ತನೆಯ ಶತಮಾನದ ಆದಿಭಾಗದ ಹೊತ್ತಿಗೆ ಬ್ರಿಟಿಷ್ ಸಾಮ್ರಾಜ್ಯ ಪ್ರಪಂಚದಲ್ಲೇ ಅತಿ ಉನ್ನತ ಸ್ಥಾನವನ್ನು ಪಡೆದಿತ್ತು. 1583 ರಲ್ಲಿ ಬ್ರಿಟಿಷರು ಮೊಟ್ಟಮೊದಲು ಉತ್ತರ ಅಮೆರಿಕದ ನ್ಯೂ ಫೌಂಡ್‍ಲೆಂಡಿನಲ್ಲಿ ವಸಾಹತನ್ನು ಸ್ಥಾಪಿಸಿದರು. ವ್ಯಾಪಾರ, ವಾಸಿಸಲು ಸ್ಥಳ-ಇವೇ ವಸಾಹತುಗಳನ್ನು ಹೊಸ ಹೊಸ ದೇಶಗಳಲ್ಲಿ

 

 ಚಿತ್ರ ಬ್ರಿಟಿಷ್ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಕಾಮನ್‍ವೆಲ್ತ್ ಪ್ರಧಾನಿಗಳು (1965)

 

ಸ್ಥಾಪಿಸಲು ಕಾರಣವಾದ ಆಕರ್ಷಣೆಗಳು. ಅವರು ಹಲವು ದೇಶಗಳನ್ನು ಯುಕ್ತಿ ಶಕ್ತಿಗಳಿಂದ ಗೆದ್ದು ತಮ್ಮದಾಗಿ ಮಾಡಿಕೊಂಡರು. ಒಪ್ಪಂದದ ಮೂಲಕವೂ ಆಕ್ರಮಣದ ಮೂಲಕವೂ ಈ ವಸಾಹತುಗಳನ್ನು ಲಂಡನ್ನಿನಲ್ಲಿರುವ ವಸಾಹತು ಕಚೇರಿ ಹಾಗೂ ಬ್ರಿಟಿಷ್ ಪಾರ್ಲಿಮೆಂಟಿನ ನೇತೃತ್ವದಲ್ಲಿ ಒಂದುಗೂಡಿಸಲಾಯಿತು. ಈ ವಸಾಹತುಗಳಲ್ಲಿ ತೆರಿಗೆ ವಿಧಿಸುವ ಹಾಗೂ ಕಾನೂನುಗಳನ್ನು ಮಾಡುವ ಅಧಿಕಾರ ಬ್ರಿಟಿಷ್ ಪಾರ್ಲಿಮೆಂಟಿಗೆ ಇತ್ತು. ಹೀಗೆ ಬ್ರಿಟಿಷ್ ಸಾಮ್ರಾಜ್ಯ ಬೆಳೆದಂತೆಲ್ಲ ವಸಾಹತುಗಳ, ರಾಜ್ಯಗಳ ಮತ್ತು ಬ್ರಿಟಿಷ್ ಪರಸ್ಪರ ಸಂಬಂಧಗಳು ವೃದ್ಧಿಗೊಂಡುವು. 19ನೆಯ ಶತಮಾನ ಮುಗಿಯುವ ಹೊತ್ತಿಗೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಉತ್ತರ ಅಮೆರಿಕದ ಕೆನಡ, ದಕ್ಷಿಣ ಆಫ್ರಿಕ ಮತ್ತು ಇತರ ಕೆಲವು ಭಾಗಗಳು, ಭಾರತ, ಬರ್ಮ, ಮಲಯ, ಸಿಂಹಳ, ಆಸ್ಟ್ರೇಲಿಯ ಮತ್ತು ನ್ಯೂ ಜೀಲೆಂಡ್‍ಗಳು ಸೇರ್ಪಡೆಯಾಗಿದ್ದುವು. 20ನೆಯ ಶತಮಾನದ ಉದಯಕಾಲದಲ್ಲಿ ವಿಶ್ವದ ನಾಲ್ಕನೆಯ ಒಂದು ಭಾಗ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಒಳಪಟ್ಟಿತ್ತು. ಈ ರೀತಿ ಬೆಳೆದ ಸಾಮ್ರಾಜ್ಯದೊಳಗೇ ಕಾಮನ್‍ವೆಲ್ತಿನ ವಿಕಾಸವಾಯಿತು.

 ಅಮೆರಿಕದ ಕ್ರಾಂತಿ : 18ನೆಯ ಶತಮಾನದಲ್ಲಿ ನಡೆದ ಅಮೆರಿಕನ್ ಕ್ರಾಂತಿ ಈ ವಿಕಾಸದಲ್ಲಿ ಒಂದು ವಿಶಿಷ್ಟ ಘಟನಿ ಎನ್ನಬಹುದು. ಉತ್ತರ ಅಮೆರಿಕದಲ್ಲಿದ್ದ 13 ವಸಾಹತುಗಳು ಬ್ರಿಟನಿನ ನೀತಿಯ ವಿರುದ್ಧ ಬಂಡಾಯವೆದ್ದು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಸಂಯುಕ್ತ ಸಂಸ್ಥಾನವಾಗಿ 1789 ರಲ್ಲಿ ಮಾರ್ಪಾಡು ಹೊಂದಿದವು. ಅಮೆರಿಕನರು ತಮ್ಮ ಪ್ರದೇಶಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಬಯಸಿದರು. ಬ್ರಿಟಿಷರು ಅದನ್ನು ಮೊಟಕುಗೊಳಿಸಲೂ ಆರ್ಥಿಕ ಅಡಚಣೆಗಳನ್ನೊಡ್ಡಲೂ ಯತ್ನಿಸಿದಾಗ ಈ ಕ್ರಾಂತಿ ನಡೆಯಿತು. ಬ್ರಿಟನ್ ಆ 13 ವಸಾಹತುಗಳನ್ನು ಕಳೆದು ಕೊಂಡಿತಾದರೂ ಇದರಿಂದ ಬ್ರಿಟನ್ ಒಂದು ಪಾಠ ಕಲಿಯಿತು. ಉಳಿದ ವಸಾಹತುಗಳೊಡನೆ ಅದು ತನ್ನ ಸಂಬಂಧವನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆಸಬೇಕಾಯಿತು. ಕ್ರಾಂತಿಯ ಅನಂತರವೂ ವಸಾಹತುಗಳ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟಿನ ರಾಜಕಿಯ ದೃಷ್ಟಿ ಅಷ್ಟಾಗಿ ಬದಲಾಗಲಿಲ್ಲ. ಆದರೆ ಕೆನಡದಲ್ಲಿ ಪರಿಸ್ಥಿತಿ ಹದಗೆಟ್ಟಾಗ ಮತ್ತೆ ಈ ಬಗ್ಗೆ ಯೋಚಿಸಲಾಯಿತು.

 ಡರ್‍ಹ್ಯಾಂ ವರದಿ ; ಡರ್‍ಹ್ಯಾಂ ವರದಿ ಕಾಮನ್‍ವೆಲ್ತ್ ವಿಕಾಸದಲ್ಲಿ ಒಂದು ವಿಶಿಷ್ಟ ಘಟ್ಟ. 19ನೆಯ ಶತಮಾನದ ಮೊದಲ ಭಾಗದಲ್ಲಿ ಬ್ರಿಟನಿನ ಅಧೀನದಲ್ಲಿದ್ದ ಕನಡದ ಜನರಲ್ಲಿ ಅಸಮಾಧಾನ ಬೆಳೆದಿತ್ತು. ಇಂಗ್ಲಿಷ್ ಜನರು ಅನೇಕ ಕಾರಣಗಳಿಂದ ಪ್ರೇರಿತವಾಗಿ ಬ್ರಿಟನ್ ದ್ವೀಪಗಳಿಂದ ವಲಸೆ ಹೊರಟು ಕೆನಡದ ಬ್ರಿಟಿಷ್ ವಿಭಾಗದಲ್ಲಿ ನೆಲೆಸಿದ್ದರು. ಹೊಸದಾಗಿ ಬಂದು ನೆಲೆಸಿದವರನ್ನು ಹಳಬರು ತಾತ್ಸಾರದಿಂದ ಕಾಣುತ್ತ ಆಡಳಿದ ಅಧಿಕಾರವೆಲ್ಲ ತಮಗೆ ಮಾತ್ರ ಇರುವಂತೆ ಒಳಸಂಧಾನ ನಡೆಸುತ್ತಿದ್ದರು. ಹೊಸದಾಗಿ ನೆಲೆಸಿದ ಬ್ರಿಟಿಷ್ ಗುಂಪಿನಲ್ಲಿ ಅತೃಪ್ತಿ ಬೆಳೆಯಿತು. ಕೆನಡದಲ್ಲಿ ಫ್ರೆಂಚ್ ಜನರ ವಿಭಾಗವೊಂದಿತ್ತು. 1837 ರ ವೇಳೆಗೆ ಈ ಎರಡು ಪ್ರಾಂತ್ಯಗಳಲ್ಲಿ ದಂಗೆಗಳೆದ್ದುವು. ಕೆನಡದ ಜನರೂ ಅಮೆರಿಕನರಂತೆ ಬ್ರಿಟಿನಿಗೆ ಎದುರುಬಿದ್ದು ಸ್ವಾತಂತ್ರ್ಯಕ್ಕೆ ಆಸೆ ಪಡಬಹುದಾದ ಸಂಭವ ಉಂಟಾಯಿತು. ಪರಿಸ್ಥಿತಿಯನ್ನು ಪರಿಶೀಲಿಸಿ ಸಮಾಧಾನಕರವಾದ ಏರ್ಪಾಟನ್ನು ಸೂಚಿಸುವಂತೆ ಲಾರ್ಡ್ ಡರ್‍ಹ್ಯಾಮನನ್ನು ಬ್ರಿಟಿಷ್ ಸರ್ಕಾರ ನೇಮಿಸಿತು. ಡರ್‍ಹ್ಯಾಂ ದೂರದೃಷ್ಟಿಯುಳ್ಳ ತೀವ್ರವಾದಿ. ಇಂಗ್ಲಿಷರು ಇಂಗ್ಲೆಂಡಿನಲ್ಲಿ ತಮ್ಮ ಆಡಳಿತ ನಡೆಸಲು ಪಡೆದಿರುವಂಥ ಸ್ವಾತಂತ್ರ್ಯವನ್ನೇ ನೆಲಸುನಾಡಿಗರಿಗೂ ಅವರ ಒಳಾಡಿತದಲ್ಲಿ ನೀಡುವುದೊಂದೇ ಉಪಾಯವೆಂದು ಈತ ತನ್ನ ವರದಿಯಲ್ಲಿ ಹೇಳಿದ. ಅದಕ್ಕನುಗುಣವಾಗಿ ಮೇಲಣ ಕೆಳಗಣ ಕೆನಡ ವಿಭಾಗಗಳು ಒಂದಾಗಬೇಕೆಂದೂ ಅಲ್ಲಿಯ ನಿವಾಸಿಗಳಿಗೆ ಜವಾಬ್ದಾರಿ ಸರ್ಕಾರ ನೀಡಬೇಕೆಂದೂ ಈತ ಸಲಹೆ ನೀಡಿದ. ಈತನ ಸಲಹೆಯನ್ನು ಬ್ರಿಟಿಷರು ಕೂಡಲೇ ಮೆಚ್ಚಲಿಲ್ಲ. ಆದರೆ ಕ್ರಮೇಣ ಅವರಿಗೆ ಇದರ ಅಗತ್ಯದ ಮನವರಿಕೆಯಾಯಿತು. 1846-49 ರಲ್ಲಿ ಉತ್ತರ ಅಮೆರಿಕದ ವಸಾಹತುಗಳಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿತವಾಯಿತು. ಆನಂತರ ಆಸ್ಟ್ರೇಲಿಯ ಮತ್ತು ನ್ಯೂ ಜೀಲೆಂಡುಗಳಿಗೂ ಈ ಬಗೆಯ ಸರ್ಕಾರಗಳು ಬಂದುವು. ವಸಾಹತುಗಳು ಅಧಿರಾಜ್ಯಗಳಾಗಿ (ಡೊಮಿನಿಯನ್) ಪರಿವರ್ತನೆಗೊಂಡದ್ದು ಈ ವಿಕಾಸದ ಇನ್ನೊಂದು ಮುಖ್ಯ ಘಟ್ಟ. ಅಕ್ಕಪಕ್ಕದಲ್ಲಿದ್ದೂ ಬೇರೆಬೇರೆಯಾಗಿದ್ದ ವಸಾಹತುಗಳು ಒಂದಾಗಿ ರಾಷ್ಟ್ರತ್ವ ಪಡೆದುವು. ಕೆನಡ ಒಂದು ಉದಾಹರಣೆ. ಅಲ್ಲಿದ್ದ ನಾಲ್ಕು ಪ್ರಾಂತ್ಯಗಳು ಬ್ರಿಟನ್ನಿನ ಒಪ್ಪಿಗೆಯೊಂದಿಗೆ ಒಂದಾದುವು. ಕೆನಡ ಅಧಿರಾಜ್ಯ ಸ್ಥಾಪನೆಯಾಯಿತು. ಇತರ ಕಡೆಗಳಲ್ಲಿ ಈ ಪರಿವರ್ತನೆ ತಡವಾಯಿತು.

 ಆಸ್ಟ್ರೇಲಿಯ ಅಧಿರಾಜ್ಯವಾದ್ದು 1901 ರಲ್ಲಿ. ದಕ್ಷಿಣ ಆಫ್ರಿಕ ಒಕ್ಕೂಟವಾದ್ದು 1910ರಲ್ಲಿ 1961 ರಿಂದ ಇದು ದಕ್ಷಿಣ ಆಫ್ರಿಕ ಗಣರಾಜ್ಯವಾಯಿತು. ನ್ಯೂಜೀóಲೆಂಡಿನಲ್ಲಿ ಮೊದಲಿನಿಂದಲೂ ಒಂದೇ ಆಡಳಿತವಿತ್ತು. ಅಲ್ಲಿ ಏಕಾತ್ಮಕ ಸಂವಿಧಾನ ಜಾರಿಗೆ ಬಂದದ್ದು 1870 ರಲ್ಲಿ. ಅಧಿರಾಜ್ಯ ಸ್ಥಾನ ಅದಕ್ಕೆ ಲಭ್ಯವಾದ್ದು 1907ರಲ್ಲಿ.

 20ನೆಯ ಶತಮಾನದ ಮೊದಲನೆಯ ದಶಕದಲ್ಲಿ ಒಟ್ಟು ಐದು ಅಧಿರಾಜ್ಯಗಳದ್ದುವು : 1 ಕೆನಡ, 2 ನ್ಯೂಜೀóಲೆಂಡ್, 3 ನ್ಯೂ ಫೌಂಡ್‍ಲೆಂಡ್, 4 ಆಸ್ಟ್ರೇಲಿಯ ಮತ್ತು 5 ದಕ್ಷಿಣ ಆಫ್ರಿಕ ಒಕ್ಕೂಟ. ಬ್ರಿಟಿಷ್ ಕಾಮನ್‍ವೆಲ್ತ್ ಹುಟ್ಟಿಕೊಂಡಿತು. ಅಧಿರಾಜ್ಯಗಳ ಒಳಾಡಳಿತ ಅಲ್ಲಿಯ ನಿವಾಸಿಗಳದು. ರಕ್ಷಣೆ ಹಾಗೂ ವಿದೇಶಾಂಗ ವ್ಯವಹಾರಗಳು ಬ್ರಿಟನಿನ ಕೈಯಲ್ಲಿದ್ದುವು. ಕ್ರಮೇಣ ಈ ವಿಷಯಗಳಲ್ಲೂ ಅಧಿರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರೆಯಿತು.

 ಒಂದನೆಯ ಮಹಾಯುದ್ಧ : ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-18) ಬ್ರಿಟಿಷ್ ಸಾಮ್ರಾಜ್ಯವಿಭಾಗಗಳಿಂದ ಯಥೇಷ್ಟವಾದ ಸೈನ್ಯಸಹಾಯವೂ. ಧನಸಹಾಯವೂ ಬ್ರಿಟನಿಗೆ ದೊರೆಯಿತು. ವಿದೇಶಾಂಗ ವ್ಯವಹಾರಗಳಲ್ಲಿ ತಮಗೆ ಬ್ರಿಟನಿನೊಂದಿಗೆ ಸರಿಸಮನಾದ ಸ್ವಾತಂತ್ರ್ಯ ಇರಬೇಕೆಂದು 1911 ರಲ್ಲಿ ನಡೆದ ಸಾಮ್ರಾಜ್ಯ ಸಮ್ಮೇಳನದಲ್ಲಿ ಅಧಿರಾಜ್ಯಗಳ ಪ್ರತಿನಿಧಿಗಳು ವಾದಿಸಿದ್ದರು. ವಿದೇಶಾಂಗ ವ್ಯವಹಾರಗಳನ್ನು ರೂಪಿಸುವ ವಿಚಾರದಲ್ಲಿ ಅಧಿರಾಜ್ಯಗಳ ಪಾತ್ರ ವಿಸ್ತರಿಸಿದ್ದು ಯುದ್ಧದ ಫಲ. 1917 ರಲ್ಲಿ ಸಾಮ್ರಾಜ್ಯ ಯುದ್ಧ ಸಂಪುಟದ ರಚನೆಯಾಯಿತು. ಯುದ್ಧ ಕಾರ್ಯದಲ್ಲಿ ಅಧಿರಾಜ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ. ತತ್ಫಲವಾಗಿ ಬ್ರಿಟನಿನಲ್ಲಿ 1917-18 ರಲ್ಲಿ ಎರಡು ಸಂಪುಟಗಳಿದ್ದುವು. ಬ್ರಿಟಿಷ್ ಸಂಪುಟದ ಹೊಣೆ ಆ ದೇಶದ ವ್ಯವಹಾರಗಳನ್ನು ಕುರಿತದ್ದು. ಇಡೀ ಸಾಮ್ರಾಜ್ಯದ ರಕ್ಷಣೆಯ ಹೊಣೆ ಸಾಮ್ರಾಜ್ಯ ಯುದ್ಧಸಂಪುಟದ್ದಾಯಿತು. ಯುದ್ಧ ಮುಗಿಯುವ ವೇಳೆಗೆ ಪ್ರತಿಯೊಂದು ಅಧಿರಾಜ್ಯವೂ ಸ್ವತಂತ್ರ ರಾಷ್ಟ್ರದಂತೆ ಪ್ರತ್ಯೇಕ ಸೈನ್ಯ ಕಟ್ಟಿಕೊಂಡಿದ್ದಲ್ಲದೆ ಅಂತರರಷ್ಟ್ರೀಯ ಸಮ್ಮೇಳನಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದುವು. ಪ್ಯಾರಿಸಿನಲ್ಲಿ ನಡೆದ ಶಾಂತಿಸಂಧಾನಗಳಲ್ಲಿ ಅಧಿರಾಜ್ಯಗಳ ಪ್ರತಿನಿಧಿಗಳು ವಹಿಸಿದ ಪಾತ್ರವೂ ಮುಖ್ಯವಾದ್ದಾಗಿತ್ತು.

 1922 ರಲ್ಲಿ ಬ್ರಿಟನಿಗೂ ತುರ್ಕಿಗೂ ನಡೆಯುತ್ತಿದ್ದ ವ್ಯವಹಾರದಲ್ಲಿ ತಮಗೇನೂ ಸಂಬಂಧವಿಲ್ಲವೆಂದು ಕೆನಡ ಆಧಿರಾಜ್ಯ ತಿಳಿಸಿತು. ಬ್ರಿಟನಿನ ವಿದೇಶಾಂಗ ವ್ಯವಹಾರದ ಪ್ರತಿಯೊಂದು ಅಂಶದಲ್ಲೂ ತಾವೇಕೆ ಭಾಗಿಗಳಾಗಬೇಕೆಂದು ವಾದಿಸುತ್ತ ಆಧಿರಾಜ್ಯಗಳು ಪ್ರತ್ಯೇಕವಾಗಿಯೇ ರಾಯಭಾರಗಳನ್ನು ಒಪ್ಪಂದಗಳನ್ನೂ ನಡೆಸುವ ಅಧಿಕಾರವನ್ನು ಬಯಸಿದುವು.

 ವೆಸ್ಟ್‍ಮಿನ್‍ಸ್ಟರ್ ಪರಿನಿಯಮ (ಸ್ಟಾಚ್ಯೂಟ್) : ಸಾಮ್ರಾಜ್ಯ ಸಮ್ಮೇಳನ ಮತ್ತೊಮ್ಮೆ ನಡೆಸಿದ್ದು 1926 ರಲ್ಲಿ, ಆ ಸಮ್ಮೇಳನದಲ್ಲಿ ಐರಿಷ್ ಸ್ವತಂತ್ರ ರಾಜ್ಯದ ಪ್ರತಿನಿಧಿಯೂ ಭಾಗವಹಿಸಿದ್ದೆ. ಬ್ರಿಟನ್ ಮತ್ತು ಅಧಿರಾಜ್ಯಗಳ ನಡುವೆ ಸಮಾನತೆಯನ್ನು ಏರ್ಪಡಿಸುವುದು ಹೇಗೆಂಬುದೇ ಅಲ್ಲಿ ನಡೆದ ಮುಖ್ಯ ಚರ್ಚೆ. ಇದರ ಫಲವಾಗಿ ರಚಿತವಾಗಿ 1930ರಲ್ಲಿ ಸಂಬಂಧಪಟ್ಟ ರಾಷ್ಟ್ರಗಳ ಒಪ್ಪಿಗೆಪಡೆದ ಪರಿನಿಯಮವೊಂದು 1931 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಅನುಮೋದನೆ ಪಡೆಯಿತು. ಬ್ರಿಟಿಷ್ ಪಾರ್ಲಿಮೆಂಟಿನ ಯಾವ ಕಾಯಿದೆಯೇ ಆಗಲಿ, ಅಧಿರಾಜ್ಯದ ಸಮ್ಮತಿಯಿಲ್ಲದೆ ಆ ರಾಜ್ಯಗಳಲ್ಲಿ ಜಾರಿಗೆ ಬರುವುದಿಲ್ಲವೆಂಬುದಾಗಿ ಶಾಸಿಸಲಾಯಿತು. ಇದರ ಪೀಠಿಕೆಯಲ್ಲಿ ಕಾಮನ್‍ವೆಲ್ತಿನ ಹೊಸ ರಚನೆಯ ಸ್ವರೂಪವನ್ನೂ ಅಧಿರಾಜ್ಯದ ಲಕ್ಷಣವನ್ನೂ ವಿವರಿಸಲಾಗಿದೆ. ಅಧಿರಾಜ್ಯಗಳಿಗೆ ನೀಡಿದ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸಮಾನತೆಗಳಿಂದ ಸಾಮ್ರಾಜ್ಯದ ಕಟ್ಟು ಸಡಿಲವಾಗುವುದು ತಪ್ಪಿತು. ಬ್ರಿಟಿಷ್ ಸಾಮ್ರಾಜ್ಯವೆಂಬ ಹೆಸರು ರೂಢಿಯಲ್ಲಿದ್ದಾಗ್ಯೂ ಅದರ ಅರ್ಥ ಬದಲಾಯಿತು. ಬ್ರಿಟಿಷ್ ಕಾಮನ್‍ವೆಲ್ತ್ ಅಥವಾ ಬ್ರಿಟಿಷ್ ರಾಷ್ಟ್ರ ಸಮುದಾಯವೆಂಬುದು ಕ್ರಮೇಣ ಹೆಚ್ಚು ಪ್ರಚುರವಾಯಿತು. ಆರು ಪ್ರತ್ಯೇಕ ರಾಷ್ಟ್ರಗಳು ಸರಿಸಮಾನತೆಯಿಂದ ಒಂದಾಗಿ ಒಬ್ಬನೇ ದೊರೆಯನ್ನೊಪ್ಪಿ ಐಕಮತ್ಯವನ್ನು ರಕ್ಷಿಸಿಕೊಂಡುವು. 1936ರಲ್ಲಿ 8ನೆಯ ಎಡ್ವರ್ಡ್ ಚಕ್ರವರ್ತಿ ಸಿಂಹಾಸನ ಪರಿತ್ಯಾಗ ಮಾಡುವ ಪ್ರಶ್ನೆ ಬಂದಾಗಲೂ ಐರ್ಲೆಂಡನ್ನು ವಿಭಜಿಸುವ ಸಂದರ್ಭದಲ್ಲೂ ಬ್ರಿಟಿಷ್ ಸರ್ಕಾರ ಕಾಮನ್‍ವೆಲ್ತಿನ ರಾಷ್ಟ್ರಗಳ ಸಲಹೆ ಪಡೆದದ್ದಲ್ಲದೆ ಅವುಗಳ ಅನುಮತಿಯನ್ನೂ ಪಡೆಯಿತು.

 ಎರಡನೆಯ ಮಹಾಯುದ್ಧ ಮತ್ತು ಅನಂತರ : ಕಾಮನ್‍ವೆಲ್ತ್ ಸದಾ ಪರಿ ವರ್ತನಶೀಲವಾದ ಸಂಸ್ಥೆ. ಎರಡನೆಯ ಮಹಾಯುದ್ಧ (1939-45) ಇದರ ಇತಿಹಾಸದಲ್ಲಿ ಇನ್ನೊಂದು ವಿಶಿಷ್ಟ ಘಟ್ಟವೆನ್ನಬಹುದು. ಆ ಕಾಲದಲ್ಲಿ ಬ್ರಿಟಿಷ್ ಕಾಮನ್‍ವೆಲ್ತ್ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಸಮಾಲೋಚನೆಗಳು ಬೆಳೆದುವು. ಒಗ್ಗಟ್ಟಿನಿಂದ ಎಲ್ಲರೂ ಹೋರಾಡಿದರು. ಆದರೆ ಈ ಮಹಾಯುದ್ಧ ಬ್ರಿಟನನ್ನು ಸಾಕಷ್ಟು ಹಣ್ಣು ಮಾಡಿತು. ಬ್ರಿಟಿಷ್ ವಸಾಹತುಗಳಲ್ಲಿ ರಾಷ್ಟೀಯ ಚಳವಳಿ ಬಿರುಸಾಗಿ ಸಾಗಿತು. ಭಾರತದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಸಾತಂತ್ರ್ಯ ಸಂಗ್ರಾಮ ಜೋರಾಗಿ ನಡೆಯಿತು. ಯುದ್ಧ ಮುಗಿದ ಮೇಲೆ ಬ್ರಿಟನ್ ಒಂದೊಂದೇ ವಸಾಹತಿಗೆ ಸ್ವಾತಂತ್ರ್ಯ ಕೊಡಬೇಕಾಯಿತು. 1947 ರಲ್ಲಿ ಭಾರತವೂ 1948 ರಲ್ಲಿ ಸಿಂಹಳ ಮತ್ತು ಬರ್ಮಗಳೂ ಸ್ವಾತಂತ್ರ್ಯ ಪಡೆದುವು. ಅದೇ ರೀತಿ ಆಫ್ರಿಕನ್ ದೇಶಗಳೂ ಕ್ರಮೇಣ ಸ್ವತಂತ್ರ್ಯವಾದುವು. ಇದರಿಂದ ಬ್ರಿಟಿಷ್ ಸಾಮ್ರಾಜ್ಯ ಚಿಕ್ಕದಾಯಿತು. ಬ್ರಿಟನ್ ತನ್ನ ಪ್ರತಿಷ್ಠೆ. ಗೌರವ ಮತ್ತು ಅಧಿಕಾರಗಳನ್ನು ಸ್ವಲ್ಪವಾದರೂ ಉಳಿಸಿಕೊಳ್ಳಬೇಕಾದರೆ ಕಾಮನ್‍ವೆಲ್ತಿನ ರಚನೆಯಲ್ಲಿ ಸೂಕ್ತ ಬದಲಾವಣೆ ಮಾಡಿ ಅದನ್ನು ಕಾಪಾಡಿಕೊಂಡು ಬರಬೇಕೆಂದು ಹಲವು ಬ್ರಿಟಿಷ್ ತಜ್ಞರು ಭಾವಿಸಿದರು. ಈ ಅಭಿಪ್ರಾಯ ಪುಷ್ಟಿಗೊಂಡು. ಯುದ್ಧಾನಂತರ ವರ್ಷಗಳಲ್ಲಿ ಬ್ರಿಟಿಷ್ ಕಾಮನ್‍ವೆಲ್ತ್ ಕೇವಲ ಕಾಮನ್‍ವೆಲ್ತ್ ರಾಷ್ಟ್ರಸಮುದಾಯವಾಗಿ ಮಾರ್ಪಾಡಾಯಿತು. ಸ್ವತಂತ್ರಗೊಂಡ ರಾಷ್ಟ್ರಗಳು ಬ್ರಿಟಿಷ್ ಕಾಮನ್‍ವೆಲ್ತನ್ನು ಸೇರಬೇಕೆಂದು ಬ್ರಿಟನ್ ಆಹ್ವಾನಿಸಿತು. ಕಾಮನ್‍ವೆಲ್ತಿನಲ್ಲಿ ಸೇರುವ ಅಥವಾ ಬಿಡುವ ವಿಚಾರವನ್ನು ಆಯಾ ದೇಶಗಳಿಗೇ ಬಿಡಲಾಯಿತು. ಮತ್ತೊಂದು ವಿಶೇಷ ಅಂಶವೆಂದರೆ ಸ್ವಾತಂತ್ರ್ಯಗಳಿಸಿದ ಅನೇಕ ರಾಷ್ಟ್ರಗಳು ಗಣರಾಜ್ಯಗಳಾಗಿದ್ದವು. ಭಾರತ, ಪಾಕಿಸ್ತಾನ, ಸಿಂಹಳಗಳು ಕಾಮನ್‍ವೆಲ್ತನ್ನು ಸೇರಿದುವು. ಬರ್ಮ ಸೇರಲಿಲ್ಲ. ಕಾಮನ್‍ವೆಲ್ತಿನ ರಚನೆಯಲ್ಲಿ ಬದಲಾವಣೆಗಳಾದುವು. ಅದರ ತಳಹದಿ ವಿಶಾಲವಾಯಿತು. ವಿಭಿನ್ ರೀತಿನೀತಿಗಳ ರಾಷ್ಟ್ರಗಳು ಅದರ ಸದಸ್ಯತ್ವ ಪಡೆದುವು.

 ಬ್ರಿಟಿಷ್ ಕಾಮನ್‍ವೆಲ್ತನ್ನು ಸೇರಿದ ಏಷ್ಯನ್ ರಾಷ್ಟ್ರಗಳು ತಮ್ಮ ಅಧೀನತೆಯ ಕಾಲದ ಅನೇಕ ಕಹಿ ನೆನಪುಗಳನ್ನು ತಮ್ಮೊಂದಿಗೆ ತಂದುವು. ಆ ರಾಷ್ಟ್ರಗಳಲ್ಲಿದ್ದ ಸ್ಪರ್ಧೆಯ ಮನೋಭಾವವೂ ತಿಕ್ಕಾಡಕ್ಕೆ ಅವಕಾಶಕೊಟ್ಟಿತು. ಭಾರತ ಪಾಕಿಸ್ತಾನಗಳ ನಡುವೆ ಸಂಭವಿಸಿದ ಬಿಕ್ಕಟ್ಟು. ದಕ್ಷಿಣ ಆಫ್ರಿಕದ ವರ್ಣನೀತಿ-ಇವು ಹೊಸ ರಾಷ್ಟ್ರಗಳು ತಮ್ಮೊಡನೆ ತಂದ ಬಿಕ್ಕಟ್ಟುಗಳಿಗೆ ಉದಾಹರಣೆಗಳು. ಅಲ್ಲದೆ ಈಗ ಕಾಮನ್‍ವೆಲ್ತ್ ಕೇವಲ ಒಕ್ಕೂಟವಾಗಿ ಉಳಿಯಲಿಲ್ಲ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಇದ್ದ ಬ್ರಿಟಿಷ್ ಕಾಮನ್‍ವೆಲ್ತ್ ಈಗ ಕೇವಲ ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯವಾಯಿತು.

 ಆದರೆ ಎರಡನೆಯ ಮಹಾಯುದ್ಧದಿಂದೀಚೆಗೆ ಕಾಮನ್‍ವೆಲ್ತಿನಲ್ಲಿ ಅನೇಕ ಬಿಕ್ಕಟ್ಟುಗಳು ತಲೆದೋರಿವೆ. ಈ ಸಮುದಾಯದ ರಾಷ್ಟ್ರಗಳಲ್ಲಿ ಅನೇಕ ವೇಳೆ ಸಮುದಾಯದ ಶಕ್ತಿಯ ಬಗ್ಗೆ ನಂಬಿಕೆ ಕುಸಿಯುವ ಸಂದರ್ಭಗಳು ಬಂದುದುಂಟು. 1956 ರಲ್ಲಿ ಸೂಯೆಜ್ ಕಾಲುವೆ ಪರಿಸ್ಥಿತಿ ಹದಗೆಟ್ಟಾಗ ಇಂಥ ಸಂದರ್ಭ ಒದಗಿಬಂತು. ಈಜಿಪ್ಟ್ ಸುಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ. ಆ ದೇಶದ ಮೇಲೆ ದಂಡೆತ್ತಿ ಹೋಗಲು ಬ್ರಿಟನ್ ಫ್ರಾನ್ಸ್‍ಗಳು ಸನ್ನಾಹ ನಡೆಸಿದುವು. ಈ ಘಟನೆ ಕಾಮನ್‍ವೆಲ್ತಿನ ಏಷ್ಯನ್ ಆಫ್ರಿಕನ್ ರಾಷ್ಟ್ರಗಳನ್ನು ಕೆರಳಿಸಿತು. ಬ್ರಿಟನ್ ತನ್ನ ವಸಾಹತು ನೀತಿಯನ್ನು ಬಿಟ್ಟಿಲ್ಲವೆಂದೂ ಸಮಯ ಸಿಕ್ಕಿದರೆ ಪರ ರಾಷ್ಟ್ರಗಳ ಮೇಲೆ ಆ ನೀತಿಯನ್ನು ಹೇರಲು ಬ್ರಿಟನ್ ಹಿಂದೆಗೆಯುವುದಿಲ್ಲವೆಂದೂ ಅನೇಕ ರಾಷ್ಟ್ರಗಳು ಟೀಕೆ ಮಾಡಿದುವು. ಇದರಿಂದ ಬ್ರಿಟನಿನ ನೇತೃತ್ವದಲ್ಲಿದ್ದ ಕಾಮನ್‍ವೆಲ್ತಿನ ಬಗ್ಗೆ ನಂಬಿಕೆ ಸಡಿಲವಾಯಿತು. ಅದೇ ರೀತಿ 1946ರಿಂದಲೂ ಬ್ರಿಟನ್ ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಲು ಸನ್ನಾಹ ನಡೆಸುತ್ತಿದ್ದು ಕೊನೆಗೆ 1971 ರಲ್ಲಿ ಅದನ್ನು ಸೇರಿತು. ಬ್ರಿಟನಿನ ದೃಷ್ಟಿ ಮೊದಲು ಯೂರೋಪಿನ ಮೇಲೆ ; ಕಾಮನ್‍ವೆಲ್ತ್ ಬರುವುದು ಅನಂತರ -ಎಂಬ ಭಾವನೆಗೆ ಇದೊಂದು ಕಾರಣ. ಅನೇಕರಿಗೆ ಇದರಿಂದ ನಿರಾಶೆಯುಂಟಾಗಿದೆ.

 1962 ರಲ್ಲಿ ಬ್ರಿಟನ್ ಕಾಮನ್‍ವೆಲ್ತ್ ರಾಷ್ಟ್ರಗಳಿಂದ ವಲಸೆ ಬರುವ ಜನರನ್ನು ನಿಯಂತ್ರಣಗೊಳಿಸುವ ಕಾನೂನನ್ನು ಜಾರಿಗೆ ತಂದಿತು. ಇದರಿಂದಲೂ ಅನೇಕ ರಾಷ್ಟ್ರಗಳಿಗೆ ಬೇಸರವಾಗಿದೆ. ಬ್ರಿಟನಿನಲ್ಲೂ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಅನೇಕ ವರ್ಣೀಯರು ಬ್ರಿಟನಿಗೆ ಬಂದು ನೆಲೆಸುವುದರಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೀಗೆ ಮಾಡಬೇಕಾಯಿತೆಂಬುದು ಬ್ರಿಟನಿನ ವಾದ. ಆದರೆ ಅದರ ಕ್ರಮ ಸಂಶಯಕ್ಕೆ ಎಡೆ ಕೊಟ್ಟಿತು. ಇಂಥ ಅನೇಕ ಬೆಳೆವಣಿಗೆಗಳು ಕಾಮನ್‍ವೆಲ್ತಿನ ಒಗ್ಗಟ್ಟಿನ್ನು ಸಡಿಲಗೊಳಿಸಿವೆ.         

(ಎ.ಎಂ.ಆರ್.; ಎಸ್.ಕೆ.ಎಸ್.)